ಯಜಮಾನ್ರೆ, ನಿಮ್ಮ ಕಡೆ ಹೇಗಿದೆ ಎಲೆಕ್ಶನ್ ಗಲಾಟೆ?
"ಹಿ, ಹೀ ಬಿಡಿ ಸ್ವಾಮಿ. ನಿಮಗೇನ್ ಗೊತ್ತಿಲ್ಲದ್ ವಿಷ್ಯನಾ ಅದು?"
ಸ್ವಲ್ಪ ಸಂಕೋಚದಿಂದಲೇ ಬಂತು ಉತ್ತರ. ಅದರ ಜೊತೆಗೆ 'ತೀರ್ಥ'ದ ವಾಸನೆಯೂ ಸಹ!
ನಿಮ್ ಪ್ರಕಾರ ಯಾರ‍್ದ್ ಬರುತ್ತೆ ಸರ್ಕಾರ?
"ಎಲ್ಲಾರ್ದು ಸ್ವಾಮಿ"
ಎಲ್ಲಾರ್ದು ಅಂದ್ರೆ?
"ಎಲ್ಲಾ ಪಕ್ಷಗಳದ್ದು. ಚಿತ್ರನ್ನ ಸರ್ಕಾರ.ಹಿ ಹೀ"
ಈಗೀಗ ಬರುವ ಸರ್ಕಾರಗಳೆಲ್ಲ ಯಾಕೆ ಚಿತ್ರನ್ನ ಸರ್ಕಾರಗಳು?
"ಪಾಪ, ಇಲೆಕ್ಸನ್‍ನಾಗೆ ಎಲ್ಲಾ ಪಕ್ಷದವ್ರೂ ಹಣ, ಹೆಂಡ ಹಂಚ್ತಾರಲ್ವಾ? ಅದಕ್ಕೆ ಎಲ್ರಿಗೂ ಅಧಿಕಾರ ಒಂದಿಂದಿಷ್ಟು ಸಿಗ್ಲಿ ಅಂತ ನಾವೇ ಅ ತರ ಸರ್ಕಾರಗಳು ಬರೋ ಹಾಗ್ ಮಾಡ್ತೀವಿ"
ನಾವೇ ಅಂದ್ರೆ?
"ವೋಟ್ ಹಾಕೊರು"
ಒಳ್ಳೆ interesting ಆಸಾಮಿನೇ ಸಿಕ್ಕಿದ್ದಾನೆ ನನಗೆ. ಆದ್ರೆ 'ತೀರ್ಥ'ದ ಪ್ರಭಾವ. ಸರಿಯಾಗಿ ನಿಲ್ಲಲ್ಲು ಆಗುತ್ತಿರಲಿಲ್ಲ. ಅದಕ್ಕೆ ಅಲ್ಲೇ ಪಕ್ಕದಲ್ಲಿದ್ದ ಶಾಲೆ ಆವರಣದಲ್ಲಿ ಕರೆದು ಕೊಂಡು ಹೋಗಿ ಕುಳ್ಳಿರಿಸಿಕೊಂಡೆ.
ಈ ತರಹ ಚಿತ್ರನ್ನಾ ಸರ್ಕಾರ ಬಂದ್ರೆ ಅವ್ರವ್ರೆ ಕಿತ್ತಾಡಿ ಇನ್ನೊಂದ್ ಎಲೆಕ್ಶನ್ ಬರೊ ಹಾಗೆ ಮಾಡ್ತಾರಲ್ವ?
"ಆಗ್ಲಿ ಬುಡಿ! ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು....................."
ಹಾಗಾದ್ರೆ ಖಜಾನೆಲಿ ಎಲ್ಲ್ ದುಡ್ಡ್ ಉಳಿಯುತ್ತೆ?
"ದುಡ್ಡಿಗ್ ಏನ್ ಬರಾ ಸಾಮಿ? ಇಷ್ಟ್ ವರ್ಸ ತಿಂದಿಲ್ವಾ? ಕಕ್‍ಲಿ ಬಿಡಿ..........."
ನಾನ್ ಹೇಳಿದ್ದು ಸರ್ಕಾರದ್ ಖಜಾನೆ........
"ಅಯ್ಯೋ ಬುಡಿ ಸಾಮಿ! ಇಲೆಕ್ಸನ್ ಆಗ್ಲಿ ಆಗ್ದಲೆ ಇರ್ಲಿ ಅದು ಕಾಲಿ ಆಗೋದು ಇದ್ದೆ ಇದೆ. ನಾವು ಓಟ್ ಹಾಕಿ ಕಳ್ಸಿದವ್ರು ಖಾಲಿ ಮಾಡ್ದೆ ಇರ್ತಾರ? ಅವಾಗ್ ಅವಗಾ ಇಲೆಕ್ಸನ್ ಬಂದ್ರೆ ಒಳ್ಳೆದೆ!!"
ನಿಮ್ಗೆಲ್ಲ ಕುಡಿಯೊಕೆ ಹೆಂಡ, ಖರ್ಚಿಗೆ ದುಡ್ಡು ಸಿಗುತ್ತಲ್ಲಾ ಅದಕ್ಕ?
"ಏ ಹೋಗಿ ಸಾಮಿ. ನೀವ್ ಜಾಸ್ತಿ ತಿಳ್ದವರಲ್ಲ. ಇಲೆಕ್ಸನ್ ಬಂದ್ರೆ ಜನ್ರ ಕೈಗೆ ವಸಿ ಕೆಲ್ಸ ಸಿಗುತ್ತೆ. ಈಗ್ ನೋಡಿ ನಾವ್ ಇಲ್ಲಿ ಕೂತಿದಿವಲ್ಲ ಇಲ್ಲಿ ನಮ್ಮಿಬ್ರನ್ನು ಬಿಟ್ಟೂ ಇನ್ನ್ಯಾರ್ದ್ರು ಕಾಣಿಸ್ತಾರ?........."
"ಕಾಣಿಸ್ತಾರ ಹೇಳಿ ಸಾಮಿ"
ಇಲ್ಲ. ಯಾಕೆ?
"ಇಲೆಕ್ಸನ್ ಬರೊದಕ್ ಮೊದ್ಲು ಇಲ್ಲೆ ನಮ್ಮೂರ ಎಲ್ಲಾ ಪುಂಡ್ ನನ್‍ಮಕ್‍ಳು ಏನು ಕೆಲ್ಸ ಇಲ್ದೆ ಇಸ್ಪೀಟ್ ಆಡ್ಕೊಂಡು ದಾರಿಲಿ ಹೋಗ್ ಬರೋ ಹೆಣ್ ಮಕ್ಳಿಗೆ ಚುಡಾಯಿಸ್ಕೊಂಡು ಉರಿನ್ ನೆಮ್ದಿ ಹಾಳ್ ಮಾಡ್ತಿದ್ರು.. ಈಗ ಯಾವ್‍ದ್ಯಾವ್ದೊ ಪಕ್ಷದವ್ರ್ ಹಿಂದೆ ಸುತ್‍ತ್ತಿದ್ದಾರೆ. ಎಲೆಕ್ಸನ್ ಮುಗಿಯೊವರ್ಗೆ ಇಲ್ಲಿ ವಸಿ ನೆಮ್ದಿ ಇರುತ್ತೆ"
"ಇನ್ನೊಂದ್ ವಿಸ್ಯ. ಆಗಾಗ್ ಇಲೆಕ್ಸನ್ ಬಂದ್ರೆ ಈ ರಾಜ್‍ಕಾರ‍್ನಿಗಳ್ ಹತ್ರ ಕಾಸ್ ಎಲ್ಲಾ ಕಾಲಿಯಾಗ್ಬಿಡುತ್ತೆ. ಆಗ ಈಗ್ ಹಂಚ್‍ತವ್ರಲ್ಲಾ ಹಂಗೆ ಹಂಚಕ್ಕೆ ಎಲ್ಲಿರುತ್ತೆ ದುಡ್ಡು? ಎಲ್ಲಾ ಪಕ್ಸದವ್ರುದು ಒಂದೇ ಗತಿ ಆಗುತ್ತೆ. ಆಗ್ ನೋಡಿ ಸರಿ ದಾರಿಗ್ ಬರ್ತಾರೆ. ವೋಟ್ ಕರೀದಿಗೆ ಕಾಸೇ ಇಲ್ಲ ಅಂದ್ಮೇಲೆ ನಮ್‍ಂತೊರಿಗೆ ತಲೆ ಕೆಡ್‍ಸೊಕೆ ಎಲ್ ಆಗುತ್ತೆ. ಆಗ ಜನ್ರ ಕೆಲ್ಸ ಸರಿ ಮಾಡಿದವ್‍ರಿಗೆ ಮಾತ್ರ ಓಟ್ ಬೀಳ್ತಾವೆ."
("ತಿರ್ಥ' ಒಳಗೆ ಹೋದ್ರೆ ಸತ್ಯ ಎಲ್ಲಾ ಹೊರಗೆ ಬರುತ್ತಂತೆ. ಈ ಆಸಾಮಿಯನ್ನು ಸಂದಂರ್ಶಿಸಿದ ಮೇಲೆ ಅದು ನಿಜ ಅನ್ನಿಸುತ್ತಿದೆ.-- ಸಂದರ್ಶಕ)
ಚಿತ್ರ : ಏ ಜೆ ಜೆ

ವರ್ಸ ವರ್ಸ ಎಲೆಕ್ಸನ್ ಬ೦ದ್ರೆ...ಎಲ್ರಿಗೂ ಒಳ್ಲೆದೆಯಾ..ಪೇಪರ್ ನೋರಿಗೆ..TV ಯೋರಿಗೆ..ಶಾಮಿಯಾನದೋರಿಗೆ..catering ನೋರಿಗೆ..ನಿರುದ್ಯೋಗಿಗಳಿಗೆ...ಎಲ್ರಿಗೂ ಕೈ ತು೦ಬಾ ಕೆಲ್ಸ..ಜೇಬು ತು೦ಬಾ ದುಡ್ಡು...ಏನ್೦ತೀರಾ...?
ReplyDeleteಜಾವೀದ್,
ReplyDeleteಮೊದಲ ಪ್ರಯತ್ನ ಚೆನ್ನಾಗಿದೆ.....ವಸ್ತು ಮತ್ತು ವಿಚಾರ ಈಗ ಪ್ರಸ್ತುತವಿರುವುದರಿಂದ ಓದಿಸಿಕೊಂಡು ಹೋಗುತ್ತದೆ...
ಇನ್ನಷ್ಟು ಹೊಸ ವಿಚಾರಗಳನ್ನು ಬರೆಯಿರಿ....ನಾನಂತೂ ಮೊದಲು ಓದುತ್ತೇನೆ...all the best...
ಧನ್ಯವಾದಗಳು...
ಏನ್ ಸ್ವಾಮೀ..ಇತಿತ್ಲಾಗೆ ಕಾಣಿಸ್ತಾನೆ ಇಲ್ಲ...!!
ReplyDeleteಜಾವೇದ್
ReplyDeleteನಿಮ್ಮ ಲೇಖನಾನ ಓದಿ..ಮತ್ತೆ ಎಲೆಕ್ಷನ್ ಬಂದ್ಬಿಡ್ತಾ ಹ್ಯಾಗೆ ಅಂತ ಅನುಮಾನ ಆಯ್ತು..ಆದ್ರೆ ಇವತ್ತೇ ಬೆಂಗಳೂರಿಂದ ಕುವೈತಿಗೆ ಮರಳಿದ್ದರಿಂದ ನಮ್ಮ ಕರುನಾಡಿನದ್ದಂತೂ ಅಲ್ಲ ಅಂತ ಖಾತ್ರಿಯಾಯ್ತು..ಆಮೇಲೆ ನೋಡಿದ್ದು ದಿನಾಂಕ...ಓಹ್...!! ಹಳೆಯ ಪೋಸ್ಟು..???!! ಚನ್ನಾಗಿದೆ ಲೇಖನ ಮತ್ತು ಶೈಲಿ...ನಿಯಮಿತವಾಗಿ ಬರೀರಿ ಜನಾಬ್....ಹೀಗಿದ್ರೆ ಹ್ಯಾಗೆ...??