ಡಿಯರ್ ಅಮೇರಿಕನ್ಸ್,
ಹೇಗಿದ್ದೀರಿ ? ರಿಸೆಷನ್ ಕತೆ ಏನಾಯಿತು? ಅದು ಮುಗಿಯುವ ಲಕ್ಷಣ ಕಾಣುತ್ತಿದೆಯಂತೆ? ಅಲ್ಲಾ ಮಾರಾಯ್ರೆ, ನೀವು, ನಿಮ್ಮ ದೇಶದ ಪಾಲಿಸಿಗಳು, ನಿಮ್ಮ ವಿರೋಧ ಪಕ್ಷದವರು ಎಲ್ಲಾ ಒಂದು ತರಹದ ಅತಿರೇಕಿಗಳು ಕಣ್ರಿ!
ಒಂದು ಲಕ್ಷದ ಬೆಲೆಯ ಮನೆಯ ಮೇಲೆ ನೇರವಾಗಿ ಹಾಗು ಪರೋಕ್ಷವಾಗಿ ಸುಮಾರು ಐದು ಲಕ್ಷದಷ್ಟು ಸಾಲ ಕೊಟ್ಟು ರಿಸೆಷನ್ ಎಂಬ ಫಜೀತಿಯನ್ನು ಮೈ ಮೇಲೆ ಎಳೆದುಕೊಂಡ್ರಿ. ಅಷ್ಟೇ ಅಲ್ಲದೇ, ನಮಗೂ ಒಂದಿಷ್ಟು ಪ್ರಸಾದದ ರೂಪದಲ್ಲಿ ಹಂಚಿಬಿಟ್ರಿ!
ಅಲ್ರೀ, ಆ ಒಬಾಮ 'ಸಾಹೇಬರು’ ಅಧ್ಯಕ್ಷರಾದ ನಂತರ, ಅವರು ಮತ್ತು ಅವರ ಮನದನ್ನೆ ಮಿಶೆಲ್ ತಮ್ಮ ದಾಂಪತ್ಯ ಜೀವನವನ್ನು ಇಷ್ಟು ವರ್ಷ ಸಾಧ್ಯವಾಗದ ರೀತಿಯಲ್ಲಿ ಹೊಸದಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಪಾಪ! ಮದುವೆಯಾದ ಹೊಸದರಲ್ಲಿ ಒಂದಿಷ್ಟು ದಿನಗಳು ಮಾತ್ರ 'ಜೊತೆ ಜೊತೆಯಲ್ಲಿ.......’ ಇದ್ದವರು ಈಗ ಸುಮಾರು ಹನ್ನೇರಡು ವರ್ಷಗಳ ನಂತರ ಒಂದೇ ಸೂರಿನಡಿಯಲ್ಲಿ ವಾರದ ಏಳೂ ದಿನಗಳು ಜೊತೆಯಾಗಿ ಕಳೆಯುವ ಭಾಗ್ಯ ಪಡೆದುಕೊಂಡಿದ್ದಾರೆ.
ಅಮೇರಿಕದ ಅಧ್ಯಕ್ಷನ ಜವಾಬ್ದಾರಿ ಏನು ಕಡಿಮೆನಾ? ಆತ ಕೇವಲ ಅಮೇರಿಕ ಅಲ್ಲ ಇಡೀ ಜಗತ್ತಿಗೆ 'ದೊಡ್ಡಣ್ಣ' ಉರುಫ್ ’ದೊಣ್ಣೆ ನಾಯಕ’ ಇದ್ದಂತೆ. ಅಂತಹ ಕೆಲಸದ ಒತ್ತಡದಲ್ಲೂ ಒಬಾಮ ಸಾಹೇಬರು ಪ್ರತಿದಿನ ಬೆಳಿಗ್ಗೆ ತಮ್ಮ ಮಕ್ಕಳು ಶಾಲೆಗೆ ಹೋಗುವಾಗ ಮೆಶೆಲ್ ಜೊತೆ ತಾವೂ 'ಟಾಟಾ, ಟಾಟಾ, ಬೈ ಬೈ ’ ಹೇಳುತ್ತಾರೆ. ಆಗಾಗ ಈ ದಂಪತಿ ಟೆನ್ನಿಸ್ ಆಡುತ್ತಾರೆ. ಒಟ್ಟಿಗೆ ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಅವರ ಸಾರ್ವಜನಿಕ ದಿನಚರಿ ಪ್ರಾರಂಭವಾಗುವುದೇ ಬೆಳಿಗ್ಗೆ ಒಂಭತ್ತರ ನಂತರ.
ಹಾಗಂತ ಅವರೇನು 'ವ್ಹೈಟ್ ಹೌಸ್’ ಅನ್ನು ಶಯನ ಗೃಹ ಮಾಡಿಕೊಂಡಿಲ್ಲ. ಬರಾಕ್ ಒಬಾಮ ಆಡಳಿತದ ನಡೆಗಳ ಬಗ್ಗೆ ಸಾರ್ವಜನಿಕ ಗ್ರಹಿಕೆ ಏನಿದೆ, ಸಾರ್ವಜನಿಕ ನಿರೀಕ್ಷೆ ಏನು? ಇಂತಹ ವಿಷಯಗಳ ಬಗ್ಗೆ ಸಾಮನ್ಯ ಗೃಹಿಣಿಯಂತೆ ಮಿಶೆಲ್ ತನ್ನ ಪತಿರಾಯನಿಗೆ feed back ನೀಡುತ್ತಾಳೆ. ಒಬಾಮ ಆಡಳಿತದ ನಿರ್ದಾರಗಳ ಮೇಲೆ ಅನವಶ್ಯಕ ಹಾಗು ಅನಪೇಕ್ಷಿತ ಪ್ರಭಾವ ಬೀರದಂತೆ ಒಂದು ಇತಿ ಮಿತಿಯಲ್ಲಿ ನಿತ್ಯ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕ್ರಿಯವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾಳೆ.
ಒಬಾಮ ಈಗಿನ ಸ್ಥಾನಕ್ಕೇರಲು ಏಣಿಯನ್ನು ನಿರ್ಮಿಸಿಕೊಳ್ಳುತ್ತಿದ್ದ ಕಾಲದಲ್ಲಿ ಇಬ್ಬರೂ ಬಹಳ ಕಷ್ಟಪಟ್ಟಿದ್ದಾರೆ. ದೀರ್ಘ ಸಮಯ ಪರಸ್ಪರರು ಏಕಾಂಗಿಯಾಗಿ ಇರಬೇಕಾಗಿ ಬಂದಿದೆ. ಬಹಳಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರ ತ್ಯಾಗ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.
ಜವಾಬ್ದಾರಿಗಳು ಹೆಚ್ಚಾದಾಗ ಕೆಲಸದ ಒತ್ತಡದಲ್ಲಿ ದಾಂಪತ್ಯ ಜೀವನ ಸೊರಗುತ್ತದೆ. ಆದರೆ ಒಬಾಮ ದಂಪತಿಯ ವಿಷಯದಲ್ಲಿ ಮಾತ್ರ ಹೊಸ ಚಿಗುರು ಮೂಡುತ್ತಿದೆ. ಇಬ್ಬರೂ ಬಹಳ ಜಾಣ್ಮೆಯಿಂದ ನಿರ್ವಹಿಸುತ್ತಿದ್ದಾರೆ.
ಒಬಾಮ ರಾಜಕೀಯಕ್ಕೆ ಬರುವುದು ಮಿಶೆಲ್ ಗೆ ಒಂದಿಷ್ಟೂ ಇಷ್ಟವಿರಲಿಲ್ಲ. ರಾಜಕೀಯ ಅವನನ್ನು ತನ್ನಿಂದ ದೂರ ಮಾಡಿಬಿಡುತ್ತದೆ ಎಂಬ ಸಹಜ ಆತಂಕ ಆಕೆಗಿತ್ತು. ಕ್ರಮೇಣ ಆತನ ದೂರದರ್ಶಿತ್ವ, ಕನಸು ಸಾಧನೆಯ ಹಂಬಲ, ಬದಲಾವಣೆ ತರಬೇಕೆಂಬ ತುಡಿತ ಇವೆಲ್ಲಾ ಮನವರಿಕೆಯಾದಾಗ ಅವನ ಹಿಂದೆ ಭದ್ರವಾಗಿ ನಿಂತು ಬಂದಿದ್ದನ್ನೆಲ್ಲಾ ಸಹಿಸಿಕೊಂಡಳು. 1995 ರಲ್ಲಿ ಕೆಳಹಂತಂದ ಚುನಾವಣೆಗೆ ಆತನಿಗೆ ಉಮೇದುವಾರಿಕೆ ಗಳಿಸಿಕೊಡುವ ಸಲುವಾಗಿ ಸಹಿ ಸಂಗ್ರಹಣೆಗಾಗಿ ಆತನ ಕ್ಷೇತ್ರದ ಪ್ರತಿ ಮನೆಯ ಬಾಗಿಲನ್ನು ಅಕ್ಷರಶಃ ಬಡಿದಿದ್ದಾಳೆ. ಆಗ ಆತನಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಳು.
ಇತ್ತೀಚಿಗೆ ಒಬಾಮನ ಹಳೇ ಬಾಸ್ಕೆಟ್ ಬಾಲ್ ಮಿತ್ರರನ್ನು ಹುಡುಕಿ, ಆತನ ಅರಿವಿಗೆ ಬಾರದಂತೆ ಆತನ ಹೂಟ್ಟುಹಬ್ಬದ ದಿನಕ್ಕೆ ಆಮಂತ್ರಿಸಿ birthday surprise ನೀಡಿದ್ದಾಳೆ.
ಇಂತಹ ಬಾಳಸಂಗಾತಿಗೆ, ಅಧ್ಯಕ್ಷ್ಯೀಯ ಚುನಾವಣೆಗಳ ಎಲ್ಲಾ ಜಂಜಾಟಗಳು ಮುಗಿದ ನಂತರ ಒಂದು 'ಮಧುರ ಸಂಜೆ’ಗಾಗಿ ನ್ಯೂ ಯಾರ್ಕ್ ಗೆ ಕರೆದುಕೊಂಡು ಹೋಗುತ್ತೇನೆಂದು ಆಶ್ವಾಸನೆ ನೀಡಿದ್ದರು ಒಬಾಮ. ಅದರಂತೆ ತಮ್ಮ ಮಾತನ್ನು ನದೆಸಿಕೊಟ್ಟರು.
ಡಿಯರ್ ಅಮೇರಿಕನ್ಸ್, ಇಷ್ಟಕ್ಕೇ ನೀವೆಲ್ಲಾ ಬೊಬ್ಬೆ ಹೊಡೆದಿರಿ. ಇಡೀ ಜಗತ್ತೇ ರಿಸೆಷನ್ ನಲ್ಲಿ ಮುಳುಗಿದೆ ಆದರೆ ಒಬಾಮ ತನ್ನ ಹೆಂಡತಿ ಜೊತೆ ತೆರಿಗೆದಾರರ ಹಣದಲ್ಲಿ ನ್ಯೂ ಯಾರ್ಕ್ ಬೀದಿಗಳಲ್ಲಿ ರೊಮ್ಯಾನ್ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದಿರಿ.
ನೆನಪಿದೆಯಾ ನಿಮಗೆ? ಸುಮಾರು ಒಂದು ದಶಕದ ಹಿಂದೆ ಬಿಲ್ ಕ್ಲಿಂಟನ್ ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾಗಿದ್ದಾಗ ಎಷ್ಟು ದೊಡ್ಡ issue ಮಾಡಿದ್ರಿ ಎಂದು? ಆ ವಿಷಯದಲ್ಲಾದರು ಒಂದಿಷ್ಟು ತರ್ಕ ಇತ್ತು ಬಿಡಿ. ಆದರೆ ಒಬಾಮ ಸ್ವಂತ ಹೆಂಡತಿಯನ್ನೂ ಪ್ರೀತ್ಸೊದು ತಪ್ಪಾ?!
ಆಗ ಕ್ಲಿಂಟನ್ ಕ್ಷಮಾಪಣೆ ಕೇಳುವಂತೆ ಮಾಡಿದ್ರಿ. ಈಗ ಪಾಪ ಒಬಾಮ 'ಈ ಅಧ್ಯಕ್ಷ ಪಟ್ಟ ಇಲ್ಲದಿದ್ದರೆ ಎಷ್ಟು ಸ್ವತಂತ್ರವಾಗಿ ಇರಬಹುದಿತ್ತು? ನನ್ನ ಸಂಗಾತಿಯೊಂದಿಗೆ ಎಲ್ಲಿ ಬೇಕಾದಲ್ಲಿ ಓಡಾಡಿದರೂ ಯಾರು ಕೇಳುತ್ತಿರಲಿಲ್ಲ. ಫೋಟೊಗ್ರಾಫರ್‍ಗಳು ಹಿಂಬಾಲಿಸುವ ಪ್ರಮೇಯವೇ ಇರುತ್ತಿರಲಿಲ್ಲ!’ ಎಂದು ಮರಗುವಂತೆ ಮಾಡುತ್ತಿದ್ದೀರಿ. ಒಬಾಮ ಮಿಶೆಲ್ ಸುಖವಾಗಿ ಇರುವುದನ್ನು ನೋಡಿ ನಿಮಗೆ ಹೊಟ್ಟೆಕಿಚ್ಚಾ?
ಈ ಅಧ್ಯಕ್ಷ ದಂಪತಿ ಅಂತರಾಷ್ಟ್ರೀಯ ಆದರ್ಶ ಜೋಡಿಯಾಗಿ ರೂಪುಗೊಳ್ಳುತ್ತಿದೆ. ಒಬಾಮಗೆ ಶಾಂತಿ ಸ್ಥಾಪನೆ ಬದಲು ಸುಖ ಸಂಸಾರದ ಸ್ಥಾಪನೆಗಾಗಿ ನೋಬೆಲ್ ಕೊಡಬಹುದಿತ್ತು. ದಯವಿಟ್ಟು ಈ ಜೋಡಿಗೆ ಹಿಂಸೆ ನೀಡಬೇಡಿ. ಇವರ ಸುಖ ದಾಂಪತ್ಯ ಅಮೇರಿಕ ಅಥವ ಜಗತ್ತಿನ ಹಿತಾಸಕ್ತಿಗೆ ಮಾರಕವಲ್ಲ. ಬದಲಿಗೆ ಪೂರಕವಾಗಿದೆ. ಅಮೇರಿಕದ ಅಧ್ಯಕ್ಷ ಶಾಂತಿ ನೆಮ್ಮದಿಯಿಂದ ಇದ್ದರೆ ಬೇರೆ ದೇಶದವರಿಗೂ ಒಂದಿಷ್ಟು ನೆಮ್ಮದಿ!?
ದಯವಿಟ್ಟು ಅರ್ಥ ಮಾಡೀಕೊಳ್ಳಿ. ಅವರನ್ನು ನೋಡಿ ನೀವೂ ಕಲಿಯಿರಿ.
ನಿಮಗೆ ಜ್ಞಾನೋದಯ ಆಗಬಹುದೆಂಬ ವಿಶ್ವಾಸದೊಂದಿಗೆ...................
ಎ ಜೆ ಜೆ

ನವಿರಾದ ಹಾಸ್ಯದಲ್ಲಕಿ ಹೇಳಿರುವ ಗಂಭೀರ ವಿಷಯವನ್ನೊಳಗೊಂಡ ಲೇಖನ!
ReplyDeleteಜಾವೀದ್,
ReplyDeleteಒಬಾಮ ದಂಪತಿಗಳ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ..ಇಷ್ಟೆಲ್ಲಾ ಸಂಗತಿಗಳು ನನಗೆ ಗೊತ್ತೇ ಇರಲಿಲ್ಲ. ಸ್ವಲ್ಪ ಹಾಸ್ಯಮಿಶ್ರಿತವಾದರೂ ಅನೇಕ ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಿರುವುದು ಕಾಣುತ್ತದೆ..
ಆತ್ಮೀಯ
ReplyDeleteನಿಮ್ಮ ಬ್ಲಾಗಿಗೆ ಮೊದಲ ಬೇಟಿ, ನಿರಾಸೆ ಆಗ್ಲಿಲ್ಲ. ಚೆನ್ನಾದ ಬರಹ. ಹಿನ್ನೆಲೆಯ ಸಂಗೀತವೂ ನನ್ನ ಮನಸೂರೆಗೊಂಡಿತು.
ಅಭಿನಂದನೆಗಳು
ಭಾಗಷ್ಯ ಈ ಲೇಖನ Unicode ನಲ್ಲಿ ಬರೆದಿಲ್ಲ ಅನ್ಸುತ್ತೆ. ಏನೂ ತಿಳಿತ ಇಲ್ಲ.
ReplyDeleteಎಲ್ಲರೂ ಹೀಗೇನೆ...public life ನಲ್ಲಿ icon ಗಳಾದಾಗ ಅವರ ಖಾಸಗಿ ಜೀವನವಕ್ಕೆ ವ್ಸಯಿಸಲು ಅವರ ಬಳಿ ಸಮಯವಿರುವುದಿಲ್ಲ...ಅ೦ತದ್ದರಲ್ಲಿ ನಮ್ಮ "ದೊಡ್ದಣ್ಣ" ಬಿಡುವು ಮಾಡಿಕೊ೦ಡು ತಮ್ಮ "ಸ್ವ೦ತ ಹೆ೦ಡತಿ" ಜೊತೆಗೆ ಕಾಲ ಕಳೆದರೆ ಅದನ್ನ appreciate ಮಾಡ್ಬೇಕು....
ReplyDeleteಚೆನ್ನಾಗಿ ಬರೆದಿದ್ದೀರಿ...ಅಭಿನ೦ದನೆಗಳು....